ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 7760990130 7760999167
ಸದರಿ ಯೋಜನೆಯು ನಿಗಮದ ನೌಕರರು ಹಾಗು ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುವುಮಾಡಿಕೊಡುತ್ತದೆ.
ನಿಗಮದ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆ ನಿಯಮಾವಳಿಗಳಿಗೆ ಒಳಪಟ್ಟ ನೌಕರರ ಅವಲಂಬಿತ ಕುಟುಂಬ ಸದಸ್ಯರು (ಗಂಡ,ಹೆಂಡತಿ,ಮಕ್ಕಳು,ತಂದೆ,ತಾಯಿ) ಫಲಾನುಭವಿಗಳು
ರಾಜ್ಯಾದ್ಯಂತ ಸುಮಾರು ನೂರಕ್ಕೂಹೆಚ್ಚು ಉನ್ನತ ದರ್ಜೆಯ ಆಸ್ಪತ್ರೆಗಳೊಂದಿಗೆ ನಗದು ರಹಿತ ಚಿಕಿತ್ಸೆ ನೀಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ನೌಕರರ ಮತ್ತು ಅವರ ಕುಟುಂಬದವರ ಸಮಸ್ತ ವಿವರಗಳನ್ನು HRMS ನಲ್ಲಿ ದಾಖಲಿಸಲಾಗಿರುತ್ತದೆ. ಸದರಿ ಮಾಹಿತಿಯನ್ನು ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸುವ ಮೊದಲು ಪರಿಶೀಲಿಸಲಾಗುತ್ತದೆ.